ಕಾರವಾರ: ಪ್ರತಿ ವರ್ಷ ರೆಡ್ ಕ್ರಾಸ್ ಜನಕ ಜೀನ್ ಹೆನ್ರಿ ಡುನಾಂಟ್‍ರವರ ಜನ್ಮ ದಿನಾಚರಣೆಯ ನಿಮಿತ್ತ ಆಚರಿಸಲಾಗುವ ‘ವಿಶ್ವ ರೆಡ್ ಕ್ರಾಸ್ ದಿನಾಚರಣೆ’ಯನ್ನು ಆಝಾದ್ ಯುಥ್ ಕ್ಲಬ್ ಕಾರವಾರದವರು ರಕ್ತದ ಅವಶ್ಯಕತೆ ಇರುವ ರೋಗಿಗಳಿಗಾಗಿ ರಕ್ತದಾನ ಮಾಡುವ ಮೂಲಕ ರಕ್ತವನ್ನು ಸಂಗ್ರಹಿಸಿ ಕೊಟ್ಟು ಆಚರಿಸಿದರು. ಕೊರೋನಾ ನಿಮಿತ್ತ ಲಾಕ್ ಡೌನ್ ಇರುವುದರಿಂದ ಬೇರೆ ಬೇರೆ ಕಾಯಿಲೆಗಳ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಾಗ ಬೇರೆ ಬೇರೆ ಗುಂಪಿನ ರಕ್ತದಾನಿಗಳು ಸಿಗುವುದು ಕಷ್ಟವಾಗಿದ್ದು, ಈ ರೀತಿ ರಕ್ತವನ್ನು ಸಂಗ್ರಹಿಸಿಟ್ಟಾಗ ರೋಗಿಗಳಿಗೆ ನೀಡಲು
ಸಹಾಯಕವಾಗುತ್ತದೆ. ಆದ್ದರಿಂದ ಸ್ವಲ್ಪ ಸ್ವಲ್ಪವಾಗಿ ರಕ್ತವನ್ನು ಸಂಗ್ರಹಿಸಿಡುವುದು ಅವಶ್ಯಕವಾಗಿದೆ. ಈ ಸಂದರ್ಭದಲ್ಲಿ ಪ್ರಥಮವಾಗಿ ಶಿವರಾಜ ತೆಂಡೂಲ್ಕರ್ ರಕ್ತದಾನ ಮಾಡಿ ಸೇವೆಯನ್ನು ಗೈದಿರುತ್ತಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳ ಬೇಕಾಗಿರುವುದರಿಂದ ಅವಶ್ಯಕತೆ ಇದ್ದಾಗ ಮುಂದೆಯೂ ಸಹ ಈ ರೀತಿಯಾಗಿ ರಕ್ತದಾನವನ್ನು ಮುಂದುವರೆಸುವ ಕಾರ್ಯ ಇವರದಾಗಿದೆ.
ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು.ಶೇಖ್, ಕ್ಲಬ್‍ನ ಅಧ್ಯಕ್ಷ ಜಾವೀದ್ ಎಮ್.ಶೇಖ್, ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್, ಭಾರತೀಯ ರೆಡ್ ಕ್ರಾಸ್‍ನ ಸದಸ್ಯೆ ಫೈರೋಜಾ ಬೇಗಂ ಎನ್.ಶೇಖ್ ಮತ್ತು ಸಿಸ್ಟ್‍ರ್ ಸೀಜಲ್ ಡಿಸೋಜಾ ಉಪಸ್ಥಿತರಿದ್ದರು.

No comments:
Post a Comment